ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಶಿರಸಿ: ಜಬ್ಬಾರ ಸಮೋ ವಾಗ್ಝರಿಯ ಮೋಡಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಆಗಸ್ಟ್ 28 , 2015
ಆಗಸ್ಟ್ 27, 2015

ಶಿರಸಿ: ಜಬ್ಬಾರ ಸಮೋ ವಾಗ್ಝರಿಯ ಮೋಡಿ

ಶಿರಸಿ : ಮತ್ತೊಮ್ಮೆ ಈ ಭಾಗಕ್ಕೆ ಆಗಮಿಸಿದ್ದ ಹೆಸರಾಂತ ಯಕ್ಷಗಾನ ಕಲಾವಿದ ದಕ್ಷಿಣ ಕನ್ನಡ ಸಂಪಾಜೆಯ ಜಬ್ಬಾರ ಸಮೋ ತಮ್ಮ ವಾಗ್ಝರಿಯ ಮೂಲಕ ಮೋಡಿಯನ್ನೇ ಮಾಡಿದರು. ರಾವಣನ ಪಾತ್ರದ ಅರ್ಥಧಾರಿಯಾಗಿ ವಿಭಿನ್ನ ಭಾವಗಳ ಮಾತಿನ ಓಗದ ಮೂಲಕ ಕಲಾರಸಿಕರ ಮನಗೆದ್ದು ಶ್ಲಾಘನೆ ಗಿಟ್ಟಿಸಿದರು.

ಇದು ನಗರದ ಟಿಎಂಎಸ್ ಸಭಾಂಗಣದಲ್ಲಿ ಯಕ್ಷ ಸಂಭ್ರಮ ಸಂಘಟನೆ ಹಮ್ಮಿಕೊಂಡಿರುವ ಯಕ್ಷಗಾನ ತಾಳಮದ್ದಲೆ ಸಪ್ತಾಹದ ನಾಲ್ಕನೇ ದಿನದ ತಾಳಮದ್ದಳೆ ಕಾರ್ಯಕ್ರಮದ ವಿಶೇಷತೆ. ದಕ್ಷೀಣೋತ್ತರ ಕನ್ನಡ ಜಿಲ್ಲೆಯ ಕಲಾವಿದರು ತರನಿಸೇನ ಕಾಳಗ ಆಖ್ಯಾನದ ತಾಳಮದ್ದಲೆ ಕಾರ್ಯಕ್ರಮವನ್ನು ಸಾದರಪಡಿಸಿದರು. ರಾಮಾಯಣದ ಮುಕ್ತಾಯ ಹಂತದಲ್ಲಿ ರಾಮ-ರಾವಣರ ಪಾಳಯದ ಸಮರದಲ್ಲಿ ತನ್ನವಳನ್ನು ಕಲೆದುಕೊಳ್ಳುತ್ತಾ ಹೋದ ರಾವಣ ಎದುರಿಸಿದ ಮಾನಸಿಕ ತೋಳಲಾಟದ ಚಿತ್ರಣವನ್ನು ಅನುಭವಿ ಕಲಾವಿದ ಜಬ್ಬಾರ ಸಮೋ ಪ್ರಾರಂಭದ ಪೀಠಿಕೆಯಲ್ಲಿ ಮನಮುಟ್ಟುವಂತೆ ಮಾತುಗಳಲ್ಲಿ ಕಟ್ಟಿಕೊಟ್ಟರು. ನಂತರದಲ್ಲಿ ತಮ್ಮ ವಿಭಿಷಣನ ಪುತ್ರ ತರಣಿಸೇನ ತಾನೂ ಸಮರಾಂಗಣದಲ್ಲಿ ಸೆಣಸುವುದಕ್ಕೆ ಸಿದ್ಧನೆಂದು ಹೇಳುತ್ತಾ ದಕ್ಕೆ ಅನುಮತಿ ನೀಡುವಂತೆ ಕೇಳಿದಾಗ ರಾವಣ ಎದುರಿಸುವ ಸಂದಿಗ್ಧತೆಯನ್ನು ಕೂಡಾ ಜಬ್ಬಾರ ಸಮೋ ಭಾವುಕತನದಿಂದ ಮಾತುಗಳಲ್ಲಿ ಚಿತ್ರಿಸಿ ಕಲಾಸಕ್ತರ ಮನತಟ್ಟುವಂತೆ ಮಾಡಿದರು.

ರಾವಣನ ಪಾಳಯ ತೋರೆದ ವಿಭಿಷಣನ ಪುತ್ರನಾಗಿ, ಅತ್ತ ತಂದೆಯ ವಿರುದ್ಧದ ಮಾತುಗಳಿಗೆ ಎದುರಾಡಲು ಆಗದ, ಇತ್ತ ದೊಡ್ಡಪ್ಪ ರಾವಣನ ಜತೆಯಲ್ಲಿ ಸೇರಿಕೊಳ್ಳಲು ಆಗದ ತುಮುಲ ಅಸಹಾಯಕತೆಯನ್ನು ಅರ್ಥಪೂರ್ಣವಾಗಿ ಚಿತ್ರಿಸಿದವರು ಕಲಾವಿದ ವಾಸುದೇವ ರಂಗ ಭಟ್ಟ.

ಸಪ್ತಾಹದಲ್ಲಿ ಪ್ರಸ್ತುತಪಡಿಸಿದ ಮತ್ತೊಂದು ಹೊಸ ಪ್ರಸಂಗವಾದ ತರಣಿಸೇನ ಆಖ್ಯಾನದ ಇನ್ನಷ್ಟು ಪಾತ್ರಗಳ ಅರ್ಥಗಾರಿಕೆಯನ್ನು ಪ್ರೊ.ಎಂ.ಎನ್.ಹೆಗಡೆ ಹಳವಳ್ಳಿ (ವಿಭಿಷಣ), ಪ್ರೊ.ಎಂ.ಎ.ಹೆಗಡೆ ದಂಟಕಲ್(ಶ್ರೀರಾಮ) ಮತ್ತು ಸೀತಾರಾಮ ಚಂದು (ಸುಪಾರ್ಶ್ಪಕ)ಸಮರ್ಥವಾಗಿ ನಿರ್ವಹಿಸಿದರು.

ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ ಇಂಪಾದ ಕಂಠ ಮಾಧುರ್ಯದ ಭಾಗವತಿಕೆಯ ಮೂಲಕ ಗಮನಸೆಳೆದರು. ಜತೆಯಲ್ಲಿ ರಾಮಕಷ್ಣ ಹೆಗಡೆ ಹಿಲ್ಲೂರು ಹಾಗೂ ಮದ್ದಳೆ ವಾದನದಲ್ಲಿ ಶಂಕರ ಭಾಗವತ, ಚಂಡೆ ವಾದನದಲ್ಲಿ ವಿಘ್ನೇಶ್ವರ ಕೆಸರಕೊಪ್ಪ ಆಕರ್ಷಿಸಿದರು.

ಇಂದು ಕಷ್ಣಾರ್ಜುನ ಕಾಳಗ ನಗರದ ಟಿಎಂಎಸ್ ಸಭಾಭವನದಲ್ಲಿ ನಡೆಯುತ್ತಿರುವ ತಾಳಮದ್ದಲೆ ಸಪ್ತಾಹದ ಐದನೇ ದಿನದಾದ ಆ 27ರ ಸಂಜೆ 4.ಕ್ಕೆ ಕಷ್ಣಾರ್ಜುನ ಕಾಳಗ ಆಖ್ಯಾನದ ತಾಳಮದ್ದಲೆ ಏರ್ಪಡಿಸಲಾಗಿದೆ.

ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗ ಭಟ್ಟ , ರಾಮ ಜೋಯಿಸ ಬೆಳ್ಳಾರೆ, ವಾದಿರಾಜ ಕಲ್ಲೂರಾಯ, ಪ್ರೊ.ಎಂ.ಎ.ಹೆಗಡೆ, ಹಾಗು ಹಿಮ್ಮೇಳದಲ್ಲಿ ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ ಹಾಗೂ ಇನ್ನಷ್ಟು ಕಲಾವಿದರು ಪಾಲ್ಗೊಳ್ಳಲಿದ್ದಾರೆ.




ಕೃಪೆ : vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ